ಸೊಸೈಟಿ ವಿಕಾಸ - Badagabettu Credit Cooperative Society

ಬೆಳೆದು ಬಂದ ಹಾದಿ, ಸ್ಥಾಪನೆ  – 1918

ಭಾರತೀಯ ಸಂಸ್ಕೃತಿಯಲ್ಲಿರುವ ಉತ್ತಮ ನೈತಿಕತೆಯಲ್ಲಿ ಸಹಕಾರವೂ ಒಂದಾಗಿದೆ. ಸಹಕಾರ ಎಂಬುದು ಒಂದು ಸಾಮಾಜಿಕ ಪ್ರಕ್ರಿಯೆ. ಸಹಕಾರವು ಸಾರ್ವತ್ರಿಕವಾದದು ಮತ್ತು ನಿರಂತರವಾದದು. ಜನರು ತಮ್ಮ ಸ್ವಾರ್ಥ ಮರೆತು ಪರಸ್ಪರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಶ್ರಮಿಸಿದ ವಿಶಾಲವಾದ ಮನೋಭಾವನೆಯೊಂದಿಗೆ ಎಲ್ಲರೂ ತನಗಾಗಿ, ತಾನು ಎಲ್ಲರಿಗಾಗಿ ಎನ್ನುವ ಧ್ಯೇಯ ವಾಕ್ಯವನ್ನು ಹೊಂದಿರುವ ಪರಿಕಲ್ಪನೆಯ ಆಧಾರವೇ ಸಹಕಾರದ ಭದ್ರ ಬುನಾದಿಯಾಗಿದೆ. ಸಮಾಜದಲ್ಲಿ ವಿವಿಧ ಕ್ಷೇತ್ರಗಳಂತೆ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯುನ್ನತ ವಿಶ್ವಸಂಸ್ಥೆಯೂ ಕೂಡಾ ಸಹಕಾರದ ಒಂದು ಸಂಕೇತವಾಗಿದೆ.
ಸಹಕಾರ ಸಂಸ್ಥೆಗಳು ಸಹಕಾರ ಪರಿಕಲ್ಪನೆಯ ಅವಿಭಾಜ್ಯ ಅಂಗಗಳಾಗಿವೆ. ನೂರಾರು ವರ್ಷಗಳ ಸುದೀರ್ಘ ಇತಿಹಾಸದಲ್ಲಿ ನಿರಂತರವಾಗಿ ಹಂತಹಂತವಾಗಿ ಮುನ್ನಡೆದು ಬಂದಿರುವ ಸಹಕಾರ ವಲಯದ ಸಂಪೂರ್ಣ ಯಶಸ್ವಿನಲ್ಲಿ ಸಹಕಾರ ಸಂಘಗಳ ಪಾತ್ರ ಅತ್ಯಂತ ಹಿರಿದಾದುದು. ಈ ನಿಟ್ಟಿನಲ್ಲಿ ಸಾಧನೆಗೆ ಹೆಸರಾಗಿ, sಸತತ ಸಾಧನೆಯನ್ನು ಮಾಡುತ್ತಲೇ ಸಮಾಜದ ಎಲ್ಲಾ ವರ್ಗಗಳ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ವಿವಿಧ ಸಾಮಾಜಿಕ, ಆರ್ಥಿಕ ಸೇವೆಗಳನ್ನು ನಿಸ್ವಾರ್ಥ ಮನೋಭಾವನೆಯೊಂದಿಗೆ, ಜವಾಬ್ದಾರಿಯುತ ಕಾರ್ಯವೈಖರಿಯೊಂದಿಗೆ ನಿರ್ವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಾಧನೆಯ ಉತ್ತುಂಗಕ್ಕೇರಿದ ಸಹಕಾರಿ ಸಂಘವೇ ಕರಾವಳಿ ಕರ್ನಾಟಕದ ಜನರ ಅಚ್ಚುಮೆಚ್ಚಿನ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾೈಟಿ ಲಿ., ಉಡುಪಿ.
ಸಹಕಾರ ಸಂಸ್ಥೆಗಳ ಮುಖ್ಯ ಉದ್ದೇಶ ಲಾಭಗಳಿಸುವುದು ಮಾತ್ರವಲ್ಲದೆ, ಸಾಮಾಜಿಕ ಅಭಿವೃದ್ದಿಯೂ ಆಗಿದೆ. ಸಾಮಾಜಿಕ ಕಳಕಳಿ ಸಹಕಾರದ ಪ್ರಮುಖ ತತ್ವವಾಗಿದ್ದು, ಇದನ್ನು ಸಹಕಾರ ಸಂಸ್ಥೆಗಳು ಅಳವಡಿಸಿಕೊಂಡು ಸೇವಾ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಸಾಮಾಜಿಕ ಪ್ರಜ್ಞೆಯ ಅಗತ್ಯತೆಯನ್ನು ಗಮನಿಸಿ ಆ ನಿಟ್ಟಿನಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಪ್ರಯತ್ನ ನಡೆಸಿವೆ ಹಾಗೂ ಯಶಸ್ವಿಯಾಗಿವೆ. ಈ ನಿಟ್ಟಿನಲ್ಲಿ ನಮ್ಮ ಸಂಘವೂ ಕೂಡಾ ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯೊಳಗೆ ಅಭೂತಪೂರ್ವ ಸಾಧನೆಯನ್ನು ಮಾಡುವುದರ ಮೂಲಕ ಸಹಕಾರ ತತ್ವ, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಮೂಲಕ ಈಗಾಗಲೇ ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು, ಎರಡನೇ ಬಾರಿಗೆ ಕೇಂದ್ರ ಸರಕಾರದ ಸಹಕಾರ ಇಲಾಖೆ (ಎನ್.ಸಿ.ಡಿ.ಸಿ.) ಯ ವತಿಯಿಂದ ನೀಡಲ್ಪಡುವ ರಾಷ್ಟ್ರಮಟ್ಟದ ನ್ಯಾಷನಲ್ ಅವಾರ್ಡ್‍ಫಾರ್ ಕೋ-ಆಪರೇಟಿವ್ ಎಕ್ಸಲೆನ್ಸ್” ಪ್ರಶಸ್ತಿ ಪಡೆದ ದೇಶದ ಏಕೈಕ ಪತ್ತಿನ ಸಹಕಾರಿ ಸಂಸ್ಥೆಯಾಗಿದೆ.


1918 ರಲ್ಲಿ ಮದ್ರಾಸ್ ಪ್ರಾಂತ್ಯದ ಅಧಿಪತ್ಯದಲ್ಲಿ ಕಟಪಾಡಿ ಬೀಡು ದಿ| ಜಗನ್ನಾಥ ಬಲ್ಲಾಳರ ಹಿರಿತನದಲ್ಲಿ ಸ್ಥಾಪನೆಗೊಂಡ ಸಂಘವು 1979 ನೇ ಇಸವಿಯವರೆಗೆ ಉಡುಪಿಯ ಆಸುಪಾಸಿನ ರೈತರಿಗೆ ಕೃಷಿ ಉಪಕರಣ, ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ, ಕೀಟ ನಾಶಕ ಸಾಮಗ್ರಿ, ಪಡಿತರ ಸಾಮಗ್ರಿಗಳ ಪೂರೈಕೆ ಹಾಗೂ ವಿತರಣೆಯನ್ನು ಪ್ರಧಾನ ವ್ಯವಹಾರವಾಗಿ ಮಾಡುತ್ತಿದ್ದುದ್ದರಿಂದ ಬೆಳವಣಿಗೆಯು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ 1980 ರ ಸಮಯದಲ್ಲಿ ಸಹಕಾರಿ ಇಲಾಖೆಯ ಆಡಳಿತಾಧಿಕಾರಿಯವರ ಅಧೀನದಲ್ಲಿದ್ದ ಸಂಘದ ಆಡಳಿತವನ್ನು ಹಿರಿಯ ಸಹಕಾರಿಗಳಾದ ಶ್ರೀಯುತ ಟಿ. ಶಂಭು ಶೆಟ್ಟಿಯವರ ನೇತೃತ್ವದಲ್ಲಿ ದಿ| ಡಾ. ಎಸ್. ರಮಾನಂದ ಭಟ್, ಶ್ರೀ ಸಂಜೀವ ಕಾಂಚನ್, ಶ್ರೀ ಪಿ.ಕೆ. ಸತ್ಯನಾರಾಯಣ, ಶ್ರೀ ಚಂದ್ರಶೇಖರ ಶೆಟ್ಟಿಗಾರ್ ಇವರನ್ನೊಳಗೊಂಡ ಆಡಳಿತ ಮಂಡಳಿಯು ವಹಿಸಿಕೊಂಡು ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರ ನಿಸ್ವಾರ್ಥ ಸೇವೆಯಿಂದ ಸಂಘದ ಪ್ರಗತಿ ಹಾಗೂ ಬೆಳವಣಿಗೆ ಹೊಸ ಆಯಾಮ ದೊರಕಿತೆನ್ನಬಹುದು.
ನಂತರ ಸಮರ್ಥ ಆಡಳಿತ ಮಂಡಳಿಯವರ ಸಹಕಾರಿ ಮನೋಭಾವ, ನಿರ್ದೇಶನ ದಕ್ಷ ನಿಸ್ವಾರ್ಥ ಸೇವೆಯ ಪ್ರಧಾನ ವ್ಯವಸ್ಥಾಪಕರು ಮತ್ತು 59 ಸ್ಥಳೀಯ ಸಿಬ್ಬಂದಿ ವರ್ಗದವರ ಪ್ರಾಮಾಣಿಕ, ಕ್ಷಿಪ್ರ ಸೇವೆಯ ಫಲಶೃತಿಯಾಗಿ ಸಂಘವು ದಿನದಿಂದ ದಿನಕ್ಕೆ ಅತ್ಯಂತ ಕ್ಷಿಪ್ರಗತಿಯಲ್ಲಿ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿರುತ್ತದೆ. 1980 ನೇ ಇಸವಿಯಲ್ಲಿ ಕೇವಲ 306 ಸದಸ್ಯರಿಂದ ರೂ. 6,200/- ಪಾಲು ಬಂಡವಾಳ ಮತ್ತು ರೂ. 4,664/- ಠೇವಣಿ ಹೊಂದಿದ್ದ ಸಂಘದ ವಾರ್ಷಿಕ ವಹಿವಾಟು ಇತ್ತೀಚಿನ ದಿನಗಳಲ್ಲಿ ದಿನವೊಂದಕ್ಕೆ ಸರಾಸರಿ 3.50 ಕೋಟಿಗೂ ಮಿಕ್ಕಿರುತ್ತದೆ. ಪ್ರಸ್ತುತ 28,587 ಸದಸ್ಯರಿಂದ ರೂ. 3.96 ಕೋಟಿ ಪಾಲು ಬಂಡವಾಳ ಹಾಗೂ ಸರಿ ಸುಮಾರು 250 ಕೋಟಿ ಠೇವಣಿಯನ್ನು ಸಂಗ್ರಹಿಸಿ, ಸ್ವತಂತ್ರ ಹಾಗೂ ಸ್ವಾವಲಂಬಿ ಘಟಕವಾಗಿ ಪರಿಗಣಿತವಾಗಿದೆ. ವರದಿ ವರ್ಷದಲ್ಲಿ ಸುಮಾರು 247 ಕೋಟಿ ರೂ. ಹೊರÀಬಾಕಿ ಸಾಲ ಇದ್ದು, ಸಂಘವು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸರಕಾರ ಅಥವಾ ಇನ್ನಿತರ ಯಾವುದೇ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ಸಹಾಯವನ್ನು ಯಾಚಿಸದೆ ತನ್ನ ಸ್ವಂತ ಸಂಪನ್ಮೂಲಗಳ ಕ್ರೋಢೀಕರಣದೊಂದಿಗೆ ವ್ಯಾಪಾರ ವಹಿವಾಟು, ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತಿದ್ದು ಸದಸ್ಯರಿಗೆ ಅವರ ಕೋರಿಕೆಗೆ ಅನುಗುಣವಾಗಿ ವಿವಿಧ ರೀತಿಯ ಸೇವೆ ಹಾಗೂ ಆರ್ಥಿಕ ಸೌಲಭ್ಯಗಳನ್ನು ನೀಡುತ್ತಾ ಬಂದಿರುತ್ತದೆ.

  1. 1918ರಲ್ಲಿ ಸ್ಥಾಪನೆ-ಪ್ರಧಾನ ಕಛೇರಿಯೊಂದಿಗೆ ಮುಖ್ಯ ಶಾಖೆ, ಮಿಷನ್ ಕಂಪೌಂಡ್, ಉಡುಪಿ.
  2. 1985ರಲ್ಲಿ ಮಾರಾಟ ವಿಭಾಗದೊಂದಿಗೆ ಉಡುಪಿ ಬೈಲೂರಿನಲ್ಲಿ ಶಾಖೆ ಆರಂಭ.
  3. 1995ರಲ್ಲಿ ಇಂದ್ರಾಳಿ ಶಾಖೆ
  4. 2002ರಲ್ಲಿ ಬೈಲೂರು ಕೊರಂಗ್ರಪಾಡಿ ಶಾಖೆ
  5. 2003ರಲ್ಲಿ ಉದ್ಯಾವರ ಶಾಖೆ
  6. 2005ರಲ್ಲಿ ಅಂಬಾಗಿಲು ಶಾಖೆ
  7. 2006ರಲ್ಲಿ ಉಡುಪಿ ಸಿಟಿ ಶಾಖೆ
  8. 2013ರಲ್ಲಿ ಮಲ್ಪೆ ಶಾಖೆ
  9. 2016ರಲ್ಲಿ ಶಿರ್ವ ಶಾಖೆ
ಸಂಪರ್ಕ ಸಂಖ್ಯೆ:

0820-2527420

ನಮ್ಮ ವಿಳಾಸ:

"ಚೇತನಾ ಕಟ್ಟಡ" ಮಿಷನ್ ಕಾಂಪೌಂಡ್,ಉಡುಪಿ -576101

ಇಮೇಲ್ ವಿಳಾಸ:

[email protected]