ಸೌಲಭ್ಯಗಳು - Badagabettu Credit Cooperative Society

ಸಂಘದ ಸದಸ್ಯರಿಗೆ ದೇಶವ್ಯಾಪಿ ಹಣ ರವಾನೆ ವ್ಯವಸ್ಥೆ ಕಲ್ಪಿಸಿದೆ.

ಸರಕಾರದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯ ಸೌಲಭ್ಯವನ್ನು ಸಂಘದ ಎಲ್ಲಾ ಸದಸ್ಯರಿಗೆ ಮತ್ತು ಸ್ವಸಹಾಯ ಗುಂಪಿನ ಸದಸ್ಯರಿಗೆ ನೀಡಿರುವುದು.

ಪ್ರಪಂಚದ ಎಲ್ಲಾ ದೇಶಗಳಿಂದ ರವಾನಿಸಲ್ಪಟ್ಟ ಹಣವನ್ನು ಕೆಲವೇ ನಿಮಿಷಗಳಲ್ಲಿ ಸಂಘದ ಎಲ್ಲಾ ಶಾಖೆಗಳಲ್ಲಿ ಪಡೆಯುವ ವ್ಯವಸ್ಥೆಯನ್ನು ಕಲ್ಪಿಸಿರುವುದು.

ಸಂಘದ ಬೈಲೂರು-ಕೊರಂಗ್ರಪಾಡಿ ಶಾಖೆಯಲ್ಲಿ ಸರಕಾರಿ ಕಾರ್ಯಕ್ರಮವಾದ 1000 ಕ್ಕೂ ಮಿಕ್ಕಿ ಪಡಿತರ ಚೀಟಿದಾರರಿಗೆ ಪಡಿತರ ಸಾಮಗ್ರಿಗಳನ್ನು ಲಾಭದಾಯಕವಲ್ಲದಿದ್ದರೂ, ಸೇವಾ ಮನೋಭಾವದ ದೃಷ್ಟಿಯಿಂದ ವಿತರಿಸಲಾಗುತ್ತಿದೆ.

ಭದ್ರತೆಯ ದೃಷ್ಟಿಯಿಂದ ಪ್ರಧಾನ ಕಛೇರಿ ಹಾಗೂ ಎಲ್ಲಾ ಶಾಖೆಗಳಿಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಸಂಘದ ಶಾಖೆಗಳಿರುವ ಕಟ್ಟಡಗಳಿಗೆ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ತುರ್ತು ಬೆಂಕಿಯಿಂದ ರಕ್ಷಣೆಗಾಗಿ ಬೆಂಕಿ ನಂದಿಸುವ ಉಪಕರಣಗಳನ್ನು ಅಳವಡಿಸಲಾಗಿದೆ. ಶಾಖೆಗಳ ವ್ಯವಹಾರವನ್ನು ಪ್ರಧಾನ ಕಛೇರಿಯಲ್ಲಿ ವೀಕ್ಷಿಸುವರೇ ಅನುಕೂಲವಾಗುವಂತೆ ಆನ್‍ಲೈನ್ ಕ್ಯಾಮರಾ ಸಿಸ್ಟಂ ಅಳವಡಿಸಲಾಗಿದೆ.

ಶಾಲಾ ಮಕ್ಕಳಿಗೆ ಉಳಿತಾಯ ಮನೋಭಾವ ಬೆಳೆಸುವ ಉದ್ದೇಶದಿಂದ “0” ಬ್ಯಾಲೆನ್ಸ್‍ನಲ್ಲಿ ಉಳಿತಾಯ ಖಾತೆ ತೆರೆಯುವ “ವಿದ್ಯಾನಿಧಿ ಉಳಿತಾಯ ಯೋಜನೆ”ಯನ್ನು ಅನುಷ್ಠಾನಗೊಳಿಸಲಾಗಿದೆ.

ಮರಣ ನಿಧಿ ಯೋಜನೆಯನ್ವಯ ಸಂಘದ ಆರ್ಥಿಕವಾಗಿ ಹಿಂದುಳಿದ ಸದಸ್ಯರು ಮೃತಪಟ್ಟಲ್ಲಿ ಅಂತ್ಯ ಸಂಸ್ಕಾರದ ವೆಚ್ಚ ಭರಿಸುವರೇ ಆರ್ಥಿಕ ಸಹಾಯವನ್ನು ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಸಂಘದ ಸದಸ್ಯರ ಹಾಗೂ ಗ್ರಾಹಕರ ಚಿನ್ನಾಭರಣಗಳು ಮತ್ತು ದಾಖಲೆಪತ್ರಗಳಿಗೆ ಭದ್ರತೆ ನೀಡುವ ಉದ್ದೇಶದಿಂದ ಉಡುಪಿ, ಇಂದ್ರಾಳಿ, ಬೈಲೂರು-ಕೊರಂಗ್ರಪಾಡಿ, ಉದ್ಯಾವರ, ಅಂಬಾಗಿಲು, ಸಿಟಿ, ಮಲ್ಪೆ ಹಾಗೂ ಶಿರ್ವ ಶಾಖೆಗಳಲ್ಲಿ ವಿಶಾಲವಾದ ಹವಾನಿಯಂತ್ರಿತ ಭದ್ರತಾ ಕೊಠಡಿಯೊಳಗೆ ಸುಮಾರು 1,200 ವಿವಿಧ ಗಾತ್ರದ ಸೇಫ್ ಲಾಕರ್‍ಗಳನ್ನು ಅಳವಡಿಸಲಾಗಿದೆ.

ರಾಜ್ಯ ಸರಕಾರದ ಇ-ಸ್ಟ್ಯಾಂಪಿಂಗ್ ಯೋಜನೆಯನ್ನು ಸಂಘದ ಮುಖಾಂತರ ಸದಸ್ಯರಿಗೆ ಒದಗಿಸಿರುವುದು

ಗ್ರಾಹಕರಿಗೆ ತ್ವರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಎಸ್‍ಎಮ್‍ಎಸ್ ಮುಖಾಂತರ ಸಂದೇಶ ರವಾನಿಸುವ ಯೋಜನೆಯನ್ನು ಅಳವಡಿಸುವುದು.

RTGS/NEFT ಸೌಲಭ್ಯಗಳನ್ನು ಒದಗಿಸಿರುವುದು.

ಜೀವವಿಮಾ ನಿಗಮದ ಮೈಕ್ರೋವಿಮಾ ಪಾಲಿಸಿಗಳನ್ನು ಸಂಘದ ಎಲ್ಲಾ ಶಾಖೆಗಳಲ್ಲಿ ಬಡವರ್ಗದ ಸದಸ್ಯರಿಗೆ ದೊರೆಯುವಂತೆ ಮಾಡಿರುವುದು.

ಸ್ಟಾರ್ ಹೆಲ್ತ್ ಆ್ಯಂಡ್ ಅಲೈಡ್ ಇನ್ಶೂರೆನ್ಸ್ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಗ್ರಾಹಕರಿಗೆ, ಸದಸ್ಯರಿಗೆ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸುತ್ತಿರುವುದು.

ಸಂಘದ ಸದಸ್ಯರಿಗೆ ಪಾನ್ ಕಾರ್ಡ್ ಸೌಲಭ್ಯ ಒದಗಿಸುತ್ತಿರುವುದು.

ಸಂಪರ್ಕ ಸಂಖ್ಯೆ:

0820-2527420

ನಮ್ಮ ವಿಳಾಸ:

"ಚೇತನಾ ಕಟ್ಟಡ" ಮಿಷನ್ ಕಾಂಪೌಂಡ್,ಉಡುಪಿ -576101

ಇಮೇಲ್ ವಿಳಾಸ:

[email protected]