ತಂಡ - Badagabettu Credit Cooperative Society

ಪ್ರಧಾನ ವ್ಯವಸ್ಥಾಪಕರು, 59 ಸಿಬ್ಬಂದಿಗಳು ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದ ಎಲ್ಲಾ ಸಿಬ್ಬಂದಿಗಳು ಗುರುತಿನ ಚೀಟಿಯೊಂದಿಗೆ ಸಮವಸ್ತ್ರ ಧರಿಸಿ ನಗುಮೊಗದ ಸೇವೆಯನ್ನು ಗ್ರಾಹಕರಿಗೆ ನೀಡುವುದರ ಮೂಲಕ ಗ್ರಾಹಕರು ಮತ್ತು ಸಹಕಾರ ಇಲಾಖಾ ಅಧಿಕಾರಿ ವರ್ಗದವರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಅನೇಕ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. 3 ತಿಂಗಳಿಗೊಮ್ಮೆ ಸಿಬ್ಬಂದಿ ಸಭೆ ಹಾಗೂ 2 ತಿಂಗಳಿಗೊಮ್ಮೆ ಶಾಖಾ ವ್ಯವಸ್ಥಾಪಕರ ಸಭೆ ಕರೆಯುವುದರ ಮೂಲಕ ಸಂಘದ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ. ಸಂಘದ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ದೈನಿಕ ಠೇವಣಿ ಸಂಗ್ರಾಹಕರಿಗೆ ಸಂಘದ ವತಿಯಿಂದ ಅಪಘಾತ ಹಾಗೂ ಆರೋಗ್ಯ ವಿಮಾ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸಂಘದಲ್ಲಿ 46 ಮಂದಿ ಪಿಗ್ಮಿ ಸಂಗ್ರಾಹಕರು ಠೇವಣಿ ಸಂಗ್ರಾಹಣೆಯಲ್ಲಿ ಅಮೂಲ್ಯ ಸೇವೆಯನ್ನು ನೀಡುತ್ತಿದ್ದಾರೆ. ಈಗಾಗಲೇ ಪಿಗ್ಮಿ ಸಂಗ್ರಾಹಾಕರಿಗೆ ಗಣಕೀಕೃತ ಪಿಗ್ಮಿ ಸಂಗ್ರಾಹಕ ಯಂತ್ರಗಳನ್ನು ಸಂಘದ ವತಿಯಿಂದ ವಿತರಿಸಲಾಗಿದ್ದು, ಉತ್ತಮ ಸೇವೆಯನ್ನು ಜನರಿಗೆ ಒದಗಿಸುವಲ್ಲಿ ಯಶಸ್ವಿಯಾಗಿರುತ್ತೇವೆ.

ಸಂಪರ್ಕ ಸಂಖ್ಯೆ:

0820-2527420

ನಮ್ಮ ವಿಳಾಸ:

"ಚೇತನಾ ಕಟ್ಟಡ" ಮಿಷನ್ ಕಾಂಪೌಂಡ್,ಉಡುಪಿ -576101

ಇಮೇಲ್ ವಿಳಾಸ:

[email protected]