ಸುಮಾರು ಮೂವತ್ತ ಮೂರು ವರುಷಗಳಿಂದ ನಾನು ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸಾೈಟಿ ( ಲಿ .) ನೊಂದಿಗೆ ನಿಕಟ ವ್ಯವಹಾರ ಸಂಬಂಧವನ್ನು ಹೊಂದಿರುತ್ತೇನೆ. ನಿಜವಾಗಿ ‘ಸಹಕಾರ’ ಎಂಬ ಪದದ ಅರ್ಥವನ್ನು ಈ ಸಂಘದ ಪ್ರಧಾನ ವ್ಯವಸ್ಥಾಪಕಲ್ಲಿ ಹಾಗೂ ನಗುಮೊಗದ ಸಿಬ್ಬಂದಿ ವರ್ಗದಲ್ಲಿ ಕಂಡುಕೊಂಡಿದ್ದೇನೆ. ನನ್ನ ಕಟ್ಟಡ ನಿರ್ಮಾಣದ ಸಮಯದಲ್ಲಿ ಹಾಗೂ ಇತರ ಕಠಿಣ ಸಂಧರ್ಭಗಳಲ್ಲಿ ರಾಷ್ಟ್ರೀಕೃತ ಬ್ಯಾಂಕಿಗಿಂತಲೂ ಮಿಗಿಲಾಗಿ ಆರ್ಥಿಕ ಬೆಂಬಲ ಪಡೆದ ನಾನು ಚಿರಋಣಿ!
ಈ ಸಂಘದ ಮೊದಲನೇ ಶಾಖೆ ಇಂದ್ರಾಳಿಯಲ್ಲಿ ಪ್ರಾರಂಭವಾದದ್ದು ನನಗೆ ಹೆಮ್ಮೆಯ ವಿಷಯ ಮತ್ತು ಇದೀಗ ಎಂಟು ಶಾಖೆಗಳೊಂದಿಗೆ ‘ಶತಮಾನೋತ್ಸವದತ್ತ’ ಸಾಗಿ ಬಂದಿರುವ ಈ ಸುಸಂದರ್ಭದಲ್ಲಿ ಇನ್ನೂ ಪ್ರಗತಿ ಹೊಂದಲೆಂದು ಮನತುಂಬಿ ಹಾರೈಸುತ್ತೇನೆ.