ನಮ್ಮ ಸಂಘ ಹಾಗೂ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಉಡುಪಿ ಅಜ್ಜರಕಾಡು ಕೇಂದ್ರದ ಸಹಭಾಗಿತ್ವದಲ್ಲಿ ಸಂಘದ ಜಗನ್ನಾಥ ಸಭಾಭವನದಲ್ಲಿ ರಕ್ಷಾಬಂಧನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಬ್ರಹ್ಮಾಕುಮಾರಿ ಸುಮಾರವರು ರಕ್ಷಾಬಂಧನದ ಮಹತ್ವ ಸಾರುವ ಸಂದೇಶ ನೀಡಿದರು. ನೆರೆದಿದ್ದವರಿಗೆ ರಾಖಿ ಕಟ್ಟುವುದರೊಂದಿಗೆ ಸಿಹಿತಿಂಡಿ ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಉಡುಪಿ ಅಜ್ಜರಕಾಡು ಕೇಂದ್ರದ ವೈ.ಮೋಹನ್, ರತ್ನಾಕರ ಕಿಣಿ, ರಘುರಾಮ್, ಸಂಘದ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ಶೇರಿಗಾರ್ ಸ್ವಾಗತಿಸಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.





