Badagabettu Society

ಬಿ.ಸಿ.ಸಿ.ಎಸ್ ಶತಮಾನೋತ್ಸವ ಮ್ಯಾರಾಥಾನ್ 10ಕೆ-2018

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸಹಕಾರಿ ಕ್ಷೇತ್ರದ ಇತಿಹಾಸದಲ್ಲೆ ಪ್ರಪ್ರಥಮವಾಗಿ ಯುವಜನತೆಯಲ್ಲಿ ಮಾದಕ ದ್ರವ್ಯ ವ್ಯಸನದಿಂದಾಗುವ ದುಷ್ಪರಿಣಾಮದ ಅರಿವು ಮೂಡಿಸಲು ಹಾಗೂ ಸ್ವಚ್ಛತಾ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲಾ ವ್ಯಾಪ್ತಿಯ ಸರ್ವರಿಗೆ ಹಾಗೂ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಬಿ.ಸಿ.ಸಿ.ಎಸ್ ಶತಮಾನೋತ್ಸವ ಮ್ಯಾರಥಾನ್ 10 ಕೆ 2018 ನ್ನು ಅಂತಾರಾಷ್ಟ್ರೀಯ ಕ್ರೀಡಾ ಪಟು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಚಾಲನೆ ನೀಡಿ ಶುಭ ಹಾರೈಸಿದರು.
ಸ್ಪರ್ದೆಯು 5 ವಿಭಾಗಗಳಲ್ಲಿ ನಡೆದಿದ್ದು ಸುಮಾರು 1200 ಕ್ರೀಡಾಳುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ, ಮಾಜಿ ಶಾಸಕ ರಘುಪತಿ ಭಟ್, ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ. ನಾಯಕ್, ಸಹಕಾರಿ ಯುನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಪುತ್ರನ್, ಮಾಹೆ ಮಣಿಪಾಲದ ಕ್ರೀಡಾ ಕಾರ್ಯದರ್ಶಿ ಡಾ| ವಿನೋದ್ ನಾಯಕ್, ಉಡುಪಿ ಜಿಲ್ಲಾ ಯುವಜನ ,ಕ್ರೀಡಾ ಇಲಾಖೆಯ ಉಪನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ಸಹಕಾರ ಸಂಘಗಳ ಕುಂದಾಪುರ ಉಪವಿಭಾಗ ಸಹಾಯಕ ನಿಬಂದಕಿ ಚಂದ್ರಪ್ರತಿಮಾ, ನಗರ ಸಭಾ ಸದಸ್ಯ ರಮೇಶ್ ಕಾಂಚನ್, ಉದ್ಯಮಿ ಜೆರ್ರಿ ವಿನ್ಸಂಟ್ ಡಯಾಸ್, ಸಂಘದ ಉಪಾಧ್ಯಕ್ಷ ಎಲ್.ಉಮಾನಾಥ್ ಉಪಸ್ಥಿತರಿದ್ದರು.
ಸೊಸಾೈಟಿ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿ, ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತುಳುವ ಶ್ರೇಷ್ಠ ಸಾಂಸ್ಥಿಕ ಪ್ರಶಸ್ತಿ

ಉಡುಪಿಯ ಪ್ರತಿಷ್ಟಿತ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾೈಟಿಯು 9ನೇ ಅಖಿಲ ಕರ್ನಾಟಕ ತುಳು ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಶತಮಾನದ ಶ್ರೇಷ್ಠ ಸಾಂಸ್ಥಿಕ ಗೌರವ ಪ್ರಶಸ್ತಿಗೆ ಭಾಜನವಾಯಿತು. ಪ್ರಶಸ್ತಿಯನ್ನು ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಾದವೈಭವಂ ವಾಸುದೇವ ಭಟ್, ಕರ್ನಾಟಕ ಸಿನಿಮಾ ಸೆನ್ಸರ್ ಮಂಡಳಿ ಸದಸ್ಯರಾದ ಜಯಪ್ರಕಾಶ್ ಅರ್ ಶೆಟ್ಟಿ, ವಿಶ್ವನಾಥ ಶೆಣೈ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕರಾದ ಜಯಕರ ಶೆಟ್ಟಿ ಇಂದ್ರಾಳಿ, ಅಖಿಲ ಕರ್ನಾಟಕ ತುಳು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಶೇಖರ್ ಅಜೆಕಾರು ಉಪಸ್ಥಿತರಿದ್ದರು.

ಸಾರ್ವಜನಿಕರ ಭಾವನೆಗಳಿಗೆ ಸ್ಪಂದಿಸಿ- ಸಚಿವ ಪ್ರಮೋದ್‍ಮದ್ವರಾಜ್

ಜನ ಸೇವೆಗಾಗಿ ಇರುವ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಸಾರ್ವಜನಿಕರ ನೋವು ಭಾವನೆಗಳಿಗೆ ಪ್ರತಿ ಹಂತದಲ್ಲೂ ಸ್ಪಂದನೆ ಸಿಗುವಂತಾಗಬೇಕು ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ಪ್ರಮೋದ್ ಮದ್ವರಾಜ್ ಅವರು ವಿಜಯ ಕರ್ನಾಟಕ ಹಾಗೂ ಟೈಮ್ಸ್ ಅ¥sóï ಇಂಡಿಯಾ ವತಿಯಿಂದ ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಸಹಯೋಗದೊಂದಿಗೆ ಟೈಮ್ಸ್ ಕನೆಕ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಜತೆಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲದಿದ್ದರೂ ಮಾಧ್ಯಮದ ಪಾತ್ರ ಬಹಳಪ್ರಮುಖ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಅಧ್ಯಕ್ಷ ದಿವಾಕರ ಶೆಟ್ಟಿ, ಸಂಚಾರಿ ಪೆÇಲೀಸ್ ಠಾಣಾ ನಿರೀಕ್ಷಕ ಶೇಖರ್,ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್,ಟೈಮ್ಸ್ ಆಫ್ ಇಂಡಿಯಾ ಮಂಗಳೂರು ಬ್ಯೂರೋ ಸ್ಟ್ಯಾನ್ಲಿ ಪಿಂಟೊ, ಮಂಗಳೂರು ವಿಭಾಗದ ಚೀ¥sóï ಮ್ಯಾನೇಜರ್ ಕದ್ರಿ ನವನೀತ್ ಶೆಟ್ಟಿ ಉಪಸ್ಥಿತರಿದ್ದರು.

ಅಪರಾಧ ಮಾಸಾಚರಣೆ

Udupi District Co-operative Societies, Udupi District Co-operative Societies, M E T Public School Udupi, Lions Club Udupi Indrali, Udupi Credit Co-operative Society, Udupi District Initiative, Inauguration and tobacco awareness awareness program was inaugurated by District Pc Lease Executive Officer Sanjeev Patil.
Udupi Indradi president Divakar Shetty, treasurer Manohar Shetty Thonse, businessman Mohammed Maula were present on the occasion.

ರಕ್ತ ವಿಧದ ಪರೀಕ್ಷೆ ಕ್ರಿಶ್ಚಿಯನ್ ಪ ಪೂ ಕಾಲೇಜು


ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ ಹಾಗೂ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ 69 ನೇ ಗಣರಾಜೋತ್ಸವ ದಿನವನ್ನು ವಿದ್ಯಾರ್ಥಿಗಳೊಂದಿಗೆ “ರಕ್ತವರ್ಗೀಕರಣ ಶಿಬಿರ”ವನ್ನು ಆಯೋಜಿಸುವುದರ ಮೂಲಕ ಕಾಲೇಜಿನಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಈ ಸಮಾರಂಭದಲ್ಲಿ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಜಯಕರ ಶೆಟ್ಟಿ ಇಂದ್ರಾಳಿ ಧ್ವಜರೋಹÀಣಗೈದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶ್ವೇತಾ ಶ್ರೀನಿವಾಸ್ ಹಾಗೂ ಸೊಸೈಟಿಯ ಸಿಬ್ಬಂದಿಗಳು,ಕಾಲೇಜಿನ ಪ್ರಾಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶ್ರೀ ನಾಗರಾಜ್ ಧನ್ಯವಾದ ಸಮರ್ಪಿಸಿ,ಶ್ರೀ ಶಂಕರ ಕೆಂಜೂರು ಕಾರ್ಯಕ್ರಮ ನಿರೂಪಿಸಿದರು.

ಮೆಡಿಕಲ್ ಕ್ಯಾಂಪ್ ಇಂದ್ರಾಳಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ.
ಪ್ರಗತಿ ಯುವಕ ಸಂಘ ಮತ್ತು ಪ್ರಗತಿ ಮಹಿಳಾ ಮಂಡಳಿ, ಇಂದ್ರಾಳಿ.
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.

ಪಲಿಮಾರು ಸ್ವಾಮೀಜಿಯವರ ಭೇಟಿ

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾದೀಶತೀರ್ಥ ಶ್ರೀಪಾದರು ಬೇಟಿ ನೀಡಿ ನೆರೆದ ಸರ್ವರಿಗೆ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂಜೀವ ಕಾಂಚನ್, ಉಪಾಧ್ಯಕ್ಷ ಎಲ್ .ಉಮಾನಾಥ್, ಶತಮಾನೋತ್ಸವ ಸಮಿತಿ ಸಂಚಾಲಕರಾದ ಪುರುಶೋತ್ತಮ ಪಿ ಶೆಟ್ಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ , ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ದೈನಿಕ ಠೇವಣಿ ಸಂಗ್ರಾಹಕರು ಮತ್ತು ಸಂಘದ ಹಿತೈಷಿಗಳು ಉಪಸ್ಥಿತರಿದ್ದರು.

Times Of India – Times Connect Program

Minister of State for Fishing, Youth Empowerment and Sports, Pramod Madwaraj, inaugurated the Times Connection program in association with the BadagaBettu Credit Co-operative Society of India, Vijay Karnataka and Times of India, in the presence of public servants and people’s feelings from people’s representatives.
The role of media in the legislative, judicial and executive constituencies is very important, “he said. Stanley Pinto, Kadri Navneet Shetty and others were present.